ಸಂಸದೆ ಸುಮಲತಾ ಕಾರ್ಯಕ್ರಮದಲ್ಲಿ ಹೈಡ್ರಾಮಾ

ಸಂಸದೆ ಸುಮಲತಾ ಅಂಬರೀಷ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಮಂಡ್ಯದ ಗೌಡಗೆರೆಯ ಮಹದೇಶ್ವರ ದೇಗುಲ ಉದ್ಘಾಟನೆಗೆ ಸಂಸದೆ ಸುಮಲತಾ ಆಗಮಿಸಿದ್ದರು. ಈ ವೇಳೆ ಗ್ರಾಮದಲ್ಲಿ ಬರೀ ಕಾಂಗ್ರೆಸ್ ನಾಯಕರ ಹಾಗೂ ಸುಮಲತಾರ ಫೋಟೊ ಹಾಕಿದ್ದೀರ ಎಂದು ಜೆಡಿಎಸ್ ಕಾರ್ಯಕರ್ತರು ಕಿರಿಕ್ ಮಾಡಿದ್ದಾರೆ. ಕಾರ್ಯಕರ್ತರ ನಡುವೆ ಕಿತ್ತಾಟ ನಡೆದ ಹಿನ್ನಲೆ ಸುಮಲತಾ ವೇದಿಕೆಯಿಂದ ಕೆಳಗೆ ಇಳಿದು ಬಂದು ಕಾರು ಹತ್ತಿದ ಪ್ರಸಂಗವೂ ನಡೀತು.