ಪಠಾಣ್ ಸಿನಿಮಾ ರಿಲೀಸ್ ವಿರೋಧಿಸಿ ಕಲ್ಲು ತೂರಾಟ

ನಟ ಶಾರೂಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಿಡುಗಡೆ ವಿರೋಧಿಸಿ ಕಲಬುರಗಿಯಲ್ಲಿ ಕಲ್ಲುತೂರಾಟ ನಡೆದಿದೆ. ಶೆಟ್ಟಿ ಮಲ್ಟಿಫ್ಲೆಕ್ಸ್ ಮುಂದೆ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನ ಪೊಲೀಸರು ಗೇಟ್ ಬಳಿಯೇ ತಡೆದಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಮಲ್ಟಿಫ್ಲೆಕ್ಸ್ನತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದ ಹತ್ತಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲಾಗಿದೆ.