‘ಕಾಂಗ್ರೆಸ್ ಮುಸ್ಲಿಂ, ದಲಿತರ ವಿರೋಧಿ’

ಕಾಂಗ್ರೆಸ್ (Congress) ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi ) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಕೇವಲ ಮುಸ್ಲಿಂ (Muslims) ಅಷ್ಟೇ ಅಲ್ಲ, ದಲಿತರ (Dalit) ವಿರೋಧಿ ಕೂಡ ಹೌದು. ವೋಟಿಗಾಗಿ ಕೆಟ್ಟ ಹುಳಗಳು ಇನ್ಮುಂದೆ ಗೋಕಾಕದ (Gokak) ಬೀದಿಗಳಲ್ಲಿ ಬರ್ತಾವೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಲ್ಲ ಅಂತಾ ಗೋಕಾಕ್​ನಲ್ಲಿ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ತಾವು ಬಿಜೆಪಿ (BJP) ಬಿಡುವ ಕುರಿತ ವದಂತಿಗೂ ಪ್ರತಿಕ್ರಿಯಿಸಿರುವ ರಮೇಶ್, ನನ್ನ ರಾಜಕೀಯ ಜೀವನದ ಅಂತ್ಯವೂ ಬಿಜೆಪಿಯಲ್ಲಿಯೇ ಅಂತಾ ಹೇಳಿದ್ದಾರೆ.